ಅಧ್ಯಕ್ಷ ಸ್ಥಾನ :- GMPS ರಾವೂರ ಶಾಲೆಯ HM ಮನೋಹರ ಜೋಷಿ ಸರ್
ಮುಖ್ಯ ಅತಿಥಿ ಸುಮಿತ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾವೂರ
ಮುಖ್ಯ ಅತಿಥಿ :-SDMC ಅಧ್ಯಕ್ಷ ಖಾಜಾಮೀಯಾ ಸರ್
ಮುಖ್ಯ ಅತಿಥಿ :-ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿದ್ದವೀರಯ್ಯ ರುದ್ನೂರ ಸರ್
ಮುಖ್ಯ ಅತಿಥಿ :- ಕ್ಷೇತ್ರ ಸಮನ್ವಯಾಧಿಕಾರಿಗಳು ಮಲ್ಲಿಕಾರ್ಜುನ ಸೇಡಂ ಸರ್
ಅತಿಥಿಗಳು:- ಶಿವಾನಂದ್ ನಾಲ್ವರ್ ಸರ್ ಅಬ್ದುಲ್ ಸಲೀಂ ಸರ್ ಪಾಶ ಸರ್ ಶಾಬಾದ್ ವಲಯದ ಬಿ ಆರ್ ಪಿ ಅಶ್ವಿನಿ ಮೇಡಂ ಬಿ ಐ ಆರ್ ಟಿ ನಾಗೂಬಾಯಿ ಮೇಡಂ ಇಸಿಯೋ ವೆಂಕಟರಡ್ಡಿ ಸರ್ ಶೃತಿ ತರುಣ್ ಎಪಿಎಫ್ ಸಂಯೋಜಕರು ಚಿತಾಪುರ ತಾಲೂಕ.
ಪ್ರಾಸ್ತಾವಿಕ :- ಕವಿತಾ ಸಾಲೋಕಿ CRP ರಾವೂರ.
ನಿರೂಪಣೆ :- ಲಕ್ಷ್ಮೀ ಸ.ಶಿ GMPS ರಾವೂರ
ಸ್ವಾಗತ :- ಭುವನೇಶ್ವರಿ ಸ.ಶಿ GMPS ರಾವೂರ
ವಂದನಾರ್ಪಣೆ :- ಅನ್ನಪೂರ್ಣ ಸ.ಶಿ ಯಶಸ್ವಿಗೊಳಿಸಿದರು
ರಾವೂರ್ ಮಟ್ಟದ ಕಲಿಕಾ ಮೇಳವು ಬಿ ಆರ್ ಸಿ ಸರ್ ಅವರು ಮತ್ತು ಅಧ್ಯಕ್ಷರು ಉದ್ಘಾಟನೆ ಮಾಡುವ ಮೂಲಕ ಚಾಲನೆಯನ್ನು ನೀಡಿದರು. ಈ ಕಲಿಕಾ ಮೇಳವು ವಿಶೇಷತೆಯಿಂದ ಕೂಡಿದ್ದು ಪ್ರತಿ ಶಿಕ್ಷಕರಿಗೆ 15 ಮಕ್ಕಳನ್ನು ನೀಡಿ ಪ್ರತಿ ವರ್ಗದಲ್ಲಿ ಟಿಎಲ್ಎಂ ಪ್ರಸ್ತುತಪಡಿಸುವ ವಿದ್ಯಾರ್ಥಿಗಳೊಟ್ಟಿಗೆ ಸಂಭಾಷಣೆಯನ್ನು ನಡೆಸಿ ಮುಂದಿನ ವರ್ಗಕ್ಕೆ ಕರೆದುಕೊಂಡು ಪ್ರತಿವರ್ಗದ ಕಲಿಕೋಪಕರಣಗಳ ವಿಷಯದ ಬಗೆಗೆ ಮಕ್ಕಳಿಗೆ ಅರ್ಥೈಸುವ ಕೆಲಸವಾಯಿತು.
ಊಟದ ವಿರಾಮದ ನಂತರ ಶಿಕ್ಷಕರ ಸಂವಾದವನೇರ್ಪಡಿಸಿ ವಿಶಿಷ್ಟತೆಯನ್ನು ಮೆರೆಯಿತು, ರಾವೂರ ಕ್ಲಸ್ಟರ್ನ ಶಿಕ್ಷಕರು ತಮ್ಮ ಸಹೋದ್ಯೋಗಿಗಳಾದ ವಾಡಿ ಮತ್ತು ಹಲಕಟ್ಟ ಕ್ಲಸ್ಟರ್ನ ನಲಿಕಲಿ ಶಿಕ್ಷಕ ರೊಟ್ಟಿಗೆ ಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು ಇಟ್ಟುಕೊಂಡು,ಕಲಿಕೋಪಕರಣ ಗಳ ಬಗೆಗಿನ ಉಪಯೋಗ, ವಿಷಯವಸು ಹಾಗು ಮಕ್ಕಳ ಕಲಿಕೆ ಮತ್ತು ಒಟ್ಟಾರೆ ಈ ಮೇಳದಿಂದಾದ ಕಲಿಕೆಯ ಬಗೆಗೆ ಶಿಕ್ಷಕರ ಶಿಕ್ಷಕರೊಟ್ಟಿಗೆ ಸಂವಾದ ಹಮ್ಮಿಕೊಂಡು ಸುಧೀರ್ಘವಾದ ಚರ್ಚೆ ನಡೆಯಿತು ಶಿಕ್ಷಕರ ಸಂವಾದ ಹೊಸ ಆಲೋಚನೆಗಳನ್ನ ಹೊಸ ವಿಷಯಗಳನ್ನು ತಮ್ಮ ತಮ್ಮ ಶಾಲೆಗೆ ಕೊಂಡೊಯ್ಯಲು ಸಾಧ್ಯವಾಯಿತೆನ್ನಬಹುದು ವಿಶಿಷ್ಟ ಸಂವಾದ ಯೋಜನೆ ಹಮ್ಮಿಕೊಂಡು ಯಶಸ್ವಿಗೊಳಿಸಿದರು ಕವಿತಾ ಮತ್ತು ಶ್ರುತಿ ಅವರು ಸಂತಸ ವ್ಯಕ್ತಪಡಿಸಿದರು.