Sunday, November 20, 2022

ರಾವೂರ ಕ್ಲಸ್ಟರ್ ಹಂತದ ಮಕ್ಕಳ ಹಬ್ಬ ಕಾರ್ಯಕ್ರಮ.

ದಿನಾಂಕ 19 /11 /2022 ಶನಿವಾರ ದಿನದಂದು ರಾವೂರ ಕ್ಲಸ್ಟರ್ ಹಂತದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠ ರಾವೂರ ನಲ್ಲಿ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಉಪ ನಿರ್ದೇಶಕರು ಆದಂತಹ ಸಕ್ರಪ್ಪ ಗೌಡ ಬಿರಾದರ್ ಸರ್ ಅವರು ಮಕ್ಕಳ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರವೇ ಮಾಡುತ್ತಿರುವ ಈ ಮಕ್ಕಳ ಹಬ್ಬದಲ್ಲಿ ಮಕ್ಕಳ ಸಂತೋಷವೇ ತುಂಬಾ ಮುಖ್ಯ ಎಂದು ತಮ್ಮ ಮಾತಿನಲ್ಲಿ ತಿಳಿಸಿದರು.
ಈ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ 20 ಅವಕಾಶದ ಆಟಗಳ ಆಯೋಜನೆಯನ್ನು ಮಾಡಲಾಗಿತ್ತು ಇಲ್ಲಿ ಮಗು ಸರ್ವ ಸ್ವತಂತ್ರವಾಗಿದ್ದು ಮಗುವಿಗೆ ಯಾವ ಆಟವೂ ಬೇಕೋ ಆಟವನ್ನು ಸೆಲೆಕ್ಟ್ ಮಾಡಿಕೊಂಡು ಅದರಲ್ಲಿ ಭಾಗಿಯಾಗುವ ಅವಕಾಶವಿತ್ತು.
ಪ್ರತಿಯೊಂದು ಆಟಕ್ಕೆ ಒಂದು ನಿಮಿಷ ಅಥವಾ ಮೂರು ಅವಕಾಶಗಳನ್ನು ನೀಡಲಾಗಿತ್ತು, ಅದರಲ್ಲಿ ಮಗು ಗೆದ್ದರೆ ಆ ಮಗುವಿಗೆ ಬಹುಮಾನ ವಿತರಣೆಯನ್ನು ಮಾಡಲಾಗುತ್ತಿತ್ತು.
ಗೆದ್ದ ಮಗುವಿಗೆ ಬಹುಮಾನ ವಿತರಣೆ.
ಬಹುಮಾನಗಳನ್ನು ಗೆದ್ದಂತ ಮಕ್ಕಳು ಖುಷಿಯೋ ಖುಷಿ ತಮ್ಮ ಅಭಿಪ್ರಾಯಗಳನ್ನು ತಮ್ಮ ಶಿಕ್ಷಕರೊಂದಿಗೆ ಹಂಚಿಕೊಳ್ಳುವುದರ ಜೊತೆಗೆ ಬಹುಮಾನಗಳು ಸಹ ಬಹಳ ಖುಷಿಯಿಂದ ತೋರಿಸುತ್ತಿತ್ತು ಆದ್ದರಿಂದ ಮಕ್ಕಳ ಹಬ್ಬದಲ್ಲಿ ಮಕ್ಕಳ ಖುಷಿಯೇ ಶಿಕ್ಷಕರ ಖುಷಿಯಾಗಿತ್ತು.
ನನ್ನ ಕ್ಲಸ್ಟರ್ ನನ್ನ ಹೆಮ್ಮೆ ನನ್ನ ಕ್ಲಸ್ಟರ್ ರಿನ ಶಿಕ್ಷಕರ ಬಳಗ.

 ಮಕ್ಕಳಿಂದಲೇ ಡೋಲು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು

No comments:

Post a Comment

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...