Tuesday, November 29, 2022

ಸಮಾಲೋಚನೆ ಸಭೆ


ಭಾಗಾಕಾರ,ಗುಣಾಕಾರ ಮತ್ತು ಭಿನ್ನರಾಶಿಯ ಪ್ರಕಾರಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಯಿತು.



ದಿನಾಂಕ 30/11/2022 ರ ದಿನದಂದು 4 ನೇ ಮತ್ತು 5ನೇ ತರಗತಿಗೆ ಕನ್ನಡ ಮತ್ತು ಗಣಿತ ಬೋಧನೆ ಮಾಡುವಂತಹ ಶಿಕ್ಷಕರಿಗೆ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭಾಲೋಚನೆ ಸಭೆಯಲ್ಲಿ ಅನೇಕ ವಿಷಯಗಳನ್ನು ಚರ್ಚಿಸಲಾಯಿತು ನಾಲ್ಕು ಮತ್ತು ಐದನೇ ತರಗತಿಗೆ ಸಂಬಂಧಪಟ್ಟಂತಹ  ಕಲಿಕಾ ಫಲಗಳು ಆ ಕಲಿಕಾ ಫಲಗಳ ಚಟುವಟಿಕೆಗಳ ಬಗ್ಗೆ ಮತ್ತು ತರಗತಿ ಪ್ರಕ್ರಿಯೆಗಳ ಬಗ್ಗೆ , ಪೂರ್ವಭಾವಿ ಚಟುವಟಿಕೆಗಳನ್ನು ನಿರ್ವಹಿಸುವುದರ ಬಗ್ಗೆ ಮಕ್ಕಳಿಗೆ ಹಾಕಿಕೊಳ್ಳವ ಕ್ರೀಯಾಯೋಜನೆ ಬಗ್ಗೆ ಚರ್ಚಿಸಲಾಯಿತು.




ದಿನಾಂಕ 29/11/2022 ದಿನದಂದು ವಲಯ ವಾರ ಸಮಾಲೋಚನ ಸಭೆಯನ್ನು ನಡೆಸಲಾಯಿತು ಈ ಸಭೆಯಲ್ಲಿ ನಲಿಕಲಿ ತರಗತಿಗೆ ಸಂಬಂಧಿಸಿದಂತಹ ಕನ್ನಡ ಮತ್ತು ಗಣಿತ ವಿಷಯಕ್ಕೆ ಸಂಬಂಧಿಸಿದಂತಹ ಕಲಿಕಾ ಫಲಗಳು ಜೊತೆಗೆ ಚಟುವಟಿಕೆಗಳ ನಿರ್ವಹಣೆ , ತರಗತಿಯ ಪ್ರಕ್ರಿಯೆ ಮತ್ತು  ಕಲಿಕೆಯಲ್ಲಿ ನಿಧಾನವಾಗಿರುವಂತಹ ಮಕ್ಕಳಿಗೆ ( multi purpose children) ಯಾವ ರೀತಿಯಾಗಿ ಕ್ರೀಯಾ ಯೋಜನೆ ಹಾಕಿಕೊಳ್ಳ ಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಚರ್ಚಿಸಲಾಯಿತು. ಇದರ ಜೊತೆಗೆ ENK ಲೆವೆಲ್ 1, ಲೆವೆಲ್ 2 
 ತರಗತಿ ನಿರ್ವಹಣೆಯ ಬಗ್ಗೆ ಚರ್ಚಿಸಲಾಯಿತು.

ಕಲಿಕಾ ಚೇತರಿಕೆ ಜಿಲ್ಲಾ ಕಾರ್ಯಪಡೆ





 ಕಲಿಕಾ ಚೇತರಿಕೆ ಜಿಲ್ಲಾ  ಕಾರ್ಯ ಪಡೆಯ ತರಗತಿ ವೀಕ್ಷಣೆ.

ಮಾನ್ಯ DDPI ಸಕ್ರೆಪ್ಪಗೌಡ ಸರ್ ರವರು ತರಗತಿ ಪ್ರಕ್ರಿಯೆಯಲ್ಲಿ ಮಕ್ಕಳ ಜೊತೆಗೆ .
 

Sunday, November 20, 2022

ರಾವೂರ ಕ್ಲಸ್ಟರ್ ಹಂತದ ಮಕ್ಕಳ ಹಬ್ಬ ಕಾರ್ಯಕ್ರಮ.

ದಿನಾಂಕ 19 /11 /2022 ಶನಿವಾರ ದಿನದಂದು ರಾವೂರ ಕ್ಲಸ್ಟರ್ ಹಂತದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠ ರಾವೂರ ನಲ್ಲಿ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಉಪ ನಿರ್ದೇಶಕರು ಆದಂತಹ ಸಕ್ರಪ್ಪ ಗೌಡ ಬಿರಾದರ್ ಸರ್ ಅವರು ಮಕ್ಕಳ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರವೇ ಮಾಡುತ್ತಿರುವ ಈ ಮಕ್ಕಳ ಹಬ್ಬದಲ್ಲಿ ಮಕ್ಕಳ ಸಂತೋಷವೇ ತುಂಬಾ ಮುಖ್ಯ ಎಂದು ತಮ್ಮ ಮಾತಿನಲ್ಲಿ ತಿಳಿಸಿದರು.
ಈ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ 20 ಅವಕಾಶದ ಆಟಗಳ ಆಯೋಜನೆಯನ್ನು ಮಾಡಲಾಗಿತ್ತು ಇಲ್ಲಿ ಮಗು ಸರ್ವ ಸ್ವತಂತ್ರವಾಗಿದ್ದು ಮಗುವಿಗೆ ಯಾವ ಆಟವೂ ಬೇಕೋ ಆಟವನ್ನು ಸೆಲೆಕ್ಟ್ ಮಾಡಿಕೊಂಡು ಅದರಲ್ಲಿ ಭಾಗಿಯಾಗುವ ಅವಕಾಶವಿತ್ತು.
ಪ್ರತಿಯೊಂದು ಆಟಕ್ಕೆ ಒಂದು ನಿಮಿಷ ಅಥವಾ ಮೂರು ಅವಕಾಶಗಳನ್ನು ನೀಡಲಾಗಿತ್ತು, ಅದರಲ್ಲಿ ಮಗು ಗೆದ್ದರೆ ಆ ಮಗುವಿಗೆ ಬಹುಮಾನ ವಿತರಣೆಯನ್ನು ಮಾಡಲಾಗುತ್ತಿತ್ತು.
ಗೆದ್ದ ಮಗುವಿಗೆ ಬಹುಮಾನ ವಿತರಣೆ.
ಬಹುಮಾನಗಳನ್ನು ಗೆದ್ದಂತ ಮಕ್ಕಳು ಖುಷಿಯೋ ಖುಷಿ ತಮ್ಮ ಅಭಿಪ್ರಾಯಗಳನ್ನು ತಮ್ಮ ಶಿಕ್ಷಕರೊಂದಿಗೆ ಹಂಚಿಕೊಳ್ಳುವುದರ ಜೊತೆಗೆ ಬಹುಮಾನಗಳು ಸಹ ಬಹಳ ಖುಷಿಯಿಂದ ತೋರಿಸುತ್ತಿತ್ತು ಆದ್ದರಿಂದ ಮಕ್ಕಳ ಹಬ್ಬದಲ್ಲಿ ಮಕ್ಕಳ ಖುಷಿಯೇ ಶಿಕ್ಷಕರ ಖುಷಿಯಾಗಿತ್ತು.
ನನ್ನ ಕ್ಲಸ್ಟರ್ ನನ್ನ ಹೆಮ್ಮೆ ನನ್ನ ಕ್ಲಸ್ಟರ್ ರಿನ ಶಿಕ್ಷಕರ ಬಳಗ.

 ಮಕ್ಕಳಿಂದಲೇ ಡೋಲು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು

Sunday, November 13, 2022

TISS ಸಂಸ್ಥೆಯ ವತಿಯಿಂದ MT ( Master traning ) ಆಯೋಜನೆ.ಸ್ಥಳ :- GHS ರಾವೂರ



 TISS ಸಂಸ್ಥೆಯ ವತಿಯಿಂದ ತಂತ್ರಜ್ಞಾನದೊಂದಿಗೆ ರಚನಾತ್ಮಕ ಬೋಧನೆ ಮತ್ತು ಕಲಿಕೆ ವಿಷಯಕ್ಕೆ ಸಂಬಂಧಿಸಿದಂತೆ 15 ಶಿಕ್ಷಕರಿಗೆ ತರಬೇತಿಯನ್ನು ನೀಡಲಾಯಿತು.
ತರಬೇತಿಯಲ್ಲಿ ಆಯೋಜಿಸಿದ ಗುಂಪು ಚಟುವಟಿಕೆಗಳು
ತರಬೇತಿಯ ತಂಡ.

ತರಬೇತಿಯನ್ನು ಮಾಡಲು ಪಡೆದ ಅನುಮತಿ ಪತ್ರ.
GROUP PRESENTATION.

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...