ಭಾಗಾಕಾರ,ಗುಣಾಕಾರ ಮತ್ತು ಭಿನ್ನರಾಶಿಯ ಪ್ರಕಾರಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಯಿತು.

ದಿನಾಂಕ 30/11/2022 ರ ದಿನದಂದು 4 ನೇ ಮತ್ತು 5ನೇ ತರಗತಿಗೆ ಕನ್ನಡ ಮತ್ತು ಗಣಿತ ಬೋಧನೆ ಮಾಡುವಂತಹ ಶಿಕ್ಷಕರಿಗೆ ಸಮಾಲೋಚನೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಭಾಲೋಚನೆ ಸಭೆಯಲ್ಲಿ ಅನೇಕ ವಿಷಯಗಳನ್ನು ಚರ್ಚಿಸಲಾಯಿತು ನಾಲ್ಕು ಮತ್ತು ಐದನೇ ತರಗತಿಗೆ ಸಂಬಂಧಪಟ್ಟಂತಹ ಕಲಿಕಾ ಫಲಗಳು ಆ ಕಲಿಕಾ ಫಲಗಳ ಚಟುವಟಿಕೆಗಳ ಬಗ್ಗೆ ಮತ್ತು ತರಗತಿ ಪ್ರಕ್ರಿಯೆಗಳ ಬಗ್ಗೆ , ಪೂರ್ವಭಾವಿ ಚಟುವಟಿಕೆಗಳನ್ನು ನಿರ್ವಹಿಸುವುದರ ಬಗ್ಗೆ ಮಕ್ಕಳಿಗೆ ಹಾಕಿಕೊಳ್ಳವ ಕ್ರೀಯಾಯೋಜನೆ ಬಗ್ಗೆ ಚರ್ಚಿಸಲಾಯಿತು.

ದಿನಾಂಕ 29/11/2022 ದಿನದಂದು ವಲಯ ವಾರ ಸಮಾಲೋಚನ ಸಭೆಯನ್ನು ನಡೆಸಲಾಯಿತು ಈ ಸಭೆಯಲ್ಲಿ ನಲಿಕಲಿ ತರಗತಿಗೆ ಸಂಬಂಧಿಸಿದಂತಹ ಕನ್ನಡ ಮತ್ತು ಗಣಿತ ವಿಷಯಕ್ಕೆ ಸಂಬಂಧಿಸಿದಂತಹ ಕಲಿಕಾ ಫಲಗಳು ಜೊತೆಗೆ ಚಟುವಟಿಕೆಗಳ ನಿರ್ವಹಣೆ , ತರಗತಿಯ ಪ್ರಕ್ರಿಯೆ ಮತ್ತು ಕಲಿಕೆಯಲ್ಲಿ ನಿಧಾನವಾಗಿರುವಂತಹ ಮಕ್ಕಳಿಗೆ ( multi purpose children) ಯಾವ ರೀತಿಯಾಗಿ ಕ್ರೀಯಾ ಯೋಜನೆ ಹಾಕಿಕೊಳ್ಳ ಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಚರ್ಚಿಸಲಾಯಿತು. ಇದರ ಜೊತೆಗೆ ENK ಲೆವೆಲ್ 1, ಲೆವೆಲ್ 2
ತರಗತಿ ನಿರ್ವಹಣೆಯ ಬಗ್ಗೆ ಚರ್ಚಿಸಲಾಯಿತು.
No comments:
Post a Comment