Monday, July 31, 2023

ನನ್ನ ಶಾಲೆ ನನ್ನ ಹೆಮ್ಮೆಶಿಕ್ಷಕರ ಕಾರ್ಯಗಾರ.

 ದಿನಾಂಕ 31/07/2023 ರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಮತ್ತು ಎಪಿಎಫ್ ಸಂಸ್ಥೆಯ ಸಂಯೋಗದೊಂದಿಗೆ ನನ್ನ ಶಾಲೆ ನನ್ನ ಹೆಮ್ಮೆ ತಾಲೂಕು ಹಂತದಲ್ಲಿ ನಲಿ ಕಲಿ ಶಿಕ್ಷಕರಿಗೆ ಮತ್ತು ನಾಲ್ಕು ಐದನೇ ತರಗತಿಗೆ ಕನ್ನಡ ಗಣಿತ ಮತ್ತು ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಬೋಧನೆ ಮಾಡುವ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರವನ್ನು ಬಿ ಆರ್ ಸಿ ಸರ್ ರವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

1.ಈ ಕಾರ್ಯಗಾರದಲ್ಲಿ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ   ಡೈಗ್ನೋಸ್ಟಿಕ್ ಅಸೆಸ್ಮೆಂಟ್  ಮತ್ತು ಮಕ್ಕಳು ಯಾವ ಹಂತದಲ್ಲಿ ಇದ್ದಾರೆ ಎಂಬುದನ್ನು ಗುರುತಿಸುವೆಕೆಯ ಬಗ್ಗೆ ಚರ್ಚೆಯನ್ನು ಮಾಡಲಾಯಿತು.

2.ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಡೈಗ್ನೋಸ್ಟಿಕ್ ಅಸೆಸ್ಮೆಂಟ್ ಟೂಲ್ ಬಗ್ಗೆ ಚರ್ಚೆಯನ್ನು ಮಾಡಲಾಯಿತು.

3.ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಡೈಗ್ನೋಸ್ಟಿಕ್ ಅಸೆಸ್ಮೆಂಟ್ ಟೂಲ್ ಮತ್ತು ಮಾದರಿಯ ಪ್ರಶ್ನೆ ಪತ್ರಿಕೆಯ ಪ್ರಕಾರಮಕ್ಕಳು ಯಾವ ಹಂತದಲ್ಲಿದ್ದಾರೆ ಎಂಬುದನ್ನು ಗುರುತಿಸಿ ಸೂಕ್ತ ಕ್ರಿಯೆ ಯೋಜನೆಯನ್ನು ಹಾಕಿಕೊಳ್ಳುವುದರ ಬಗ್ಗೆ ಚರ್ಚೆಯನ್ನು ಮಾಡಲಾಯಿತು.

ಮಾನ್ಯ ಕ್ಷೇತ್ರ ಸಮನ್ವಯ ಅಧಿಕಾರಿಗಳು ಆದಂತಹ ಮಲ್ಲಿಕಾರ್ಜುನ್ ಸೇಡಂ ಸರ್ ಅವರು ನನ್ನ ಶಾಲೆ ನನ್ನ ಹೆಮ್ಮೆಯ
ಶಿಕ್ಷಕರ ಕಾರ್ಯಗಾರದಲ್ಲಿ ಮೊದಲನೆಯ ಅವಧಿಯನ್ನು ತೆಗೆದುಕೊಂಡು ಅದರಲ್ಲಿ ಬರುವಂತಹ ರೂಪರೇಷೆಗಳು ಶಿಕ್ಷಕರ , ಮುಖ್ಯ ಗುರುಗಳು,ಸಿ ಆರ್ ಪಿ ಬಿ ಆರ್ ಪಿ,ಮತ್ತು ಮೇಲಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ವಿವರವಾಗಿ ವಿವರಿಸಿದರು.




No comments:

Post a Comment

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...