Monday, July 31, 2023

ನನ್ನ ಶಾಲೆ ನನ್ನ ಹೆಮ್ಮೆಶಿಕ್ಷಕರ ಕಾರ್ಯಗಾರ.

 ದಿನಾಂಕ 31/07/2023 ರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಮತ್ತು ಎಪಿಎಫ್ ಸಂಸ್ಥೆಯ ಸಂಯೋಗದೊಂದಿಗೆ ನನ್ನ ಶಾಲೆ ನನ್ನ ಹೆಮ್ಮೆ ತಾಲೂಕು ಹಂತದಲ್ಲಿ ನಲಿ ಕಲಿ ಶಿಕ್ಷಕರಿಗೆ ಮತ್ತು ನಾಲ್ಕು ಐದನೇ ತರಗತಿಗೆ ಕನ್ನಡ ಗಣಿತ ಮತ್ತು ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಬೋಧನೆ ಮಾಡುವ ಶಿಕ್ಷಕರಿಗೆ ಒಂದು ದಿನದ ಕಾರ್ಯಗಾರವನ್ನು ಬಿ ಆರ್ ಸಿ ಸರ್ ರವರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

1.ಈ ಕಾರ್ಯಗಾರದಲ್ಲಿ ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ   ಡೈಗ್ನೋಸ್ಟಿಕ್ ಅಸೆಸ್ಮೆಂಟ್  ಮತ್ತು ಮಕ್ಕಳು ಯಾವ ಹಂತದಲ್ಲಿ ಇದ್ದಾರೆ ಎಂಬುದನ್ನು ಗುರುತಿಸುವೆಕೆಯ ಬಗ್ಗೆ ಚರ್ಚೆಯನ್ನು ಮಾಡಲಾಯಿತು.

2.ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಡೈಗ್ನೋಸ್ಟಿಕ್ ಅಸೆಸ್ಮೆಂಟ್ ಟೂಲ್ ಬಗ್ಗೆ ಚರ್ಚೆಯನ್ನು ಮಾಡಲಾಯಿತು.

3.ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಡೈಗ್ನೋಸ್ಟಿಕ್ ಅಸೆಸ್ಮೆಂಟ್ ಟೂಲ್ ಮತ್ತು ಮಾದರಿಯ ಪ್ರಶ್ನೆ ಪತ್ರಿಕೆಯ ಪ್ರಕಾರಮಕ್ಕಳು ಯಾವ ಹಂತದಲ್ಲಿದ್ದಾರೆ ಎಂಬುದನ್ನು ಗುರುತಿಸಿ ಸೂಕ್ತ ಕ್ರಿಯೆ ಯೋಜನೆಯನ್ನು ಹಾಕಿಕೊಳ್ಳುವುದರ ಬಗ್ಗೆ ಚರ್ಚೆಯನ್ನು ಮಾಡಲಾಯಿತು.

ಮಾನ್ಯ ಕ್ಷೇತ್ರ ಸಮನ್ವಯ ಅಧಿಕಾರಿಗಳು ಆದಂತಹ ಮಲ್ಲಿಕಾರ್ಜುನ್ ಸೇಡಂ ಸರ್ ಅವರು ನನ್ನ ಶಾಲೆ ನನ್ನ ಹೆಮ್ಮೆಯ
ಶಿಕ್ಷಕರ ಕಾರ್ಯಗಾರದಲ್ಲಿ ಮೊದಲನೆಯ ಅವಧಿಯನ್ನು ತೆಗೆದುಕೊಂಡು ಅದರಲ್ಲಿ ಬರುವಂತಹ ರೂಪರೇಷೆಗಳು ಶಿಕ್ಷಕರ , ಮುಖ್ಯ ಗುರುಗಳು,ಸಿ ಆರ್ ಪಿ ಬಿ ಆರ್ ಪಿ,ಮತ್ತು ಮೇಲಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ವಿವರವಾಗಿ ವಿವರಿಸಿದರು.




Wednesday, July 26, 2023

ನಲಿ ಕಲಿ ರೂಪಣಾತ್ಮಕ ಮೌಲ್ಯಮಾಪನ 1

 ನಲಿ ಕಲಿ ರೂಪಣಾತ್ಮಕ ಮೌಲ್ಯಮಾಪನ 1 ( FA 1) ಮೌಲ್ಯಾಂಕನ ಸೂಚನೆಗಳ ಫೈಲ್ ಗಳು DSERT ಲಿಂಕ್

CLICK HERE

Monday, July 24, 2023

ಮೂರನೇಯ ತರಗತಿಯ ಶಿಕ್ಷಕರ ವೈಯಕ್ತಿಕ ಅಂಕವಹಿ.,

CLICK HERE PDF

ಎರಡನೇಯ ತರಗತಿಯ ಶಿಕ್ಷಕರ ವೈಯಕ್ತಿಕ ಅಂಕವಹಿ.

CLICK HERE PDF

ಒಂದನೇಯ ತರಗತಿಯ ಶಿಕ್ಷಕರ ವೈಯಕ್ತಿಕ ಅಂಕವಹಿ.

CLICK HERE PDF 

GMPS ರಾವೂರ ಶಾಲಾ ಭೇಟಿ.

 ದಿನಾಂಕ 24.07.2023 ಸೋಮವಾರ ದಿನದಂದು ಮಾನ್ಯ ಉಪನಿರ್ದೇಶಕರ ಕಚೇರಿಯಿಂದ ಎಸ್ ಎಸ್ ಎ ಎ ಪಿ ಸಿ ಅಧಿಕಾರಿಗಳು ಆದಂತಹ ಬಸಣ್ಣಗೌಡ ಸರ್ ಮತ್ತು ಎಸ್ ಎಸ್ ಎ ವಿಷಯ ಪರಿವೀಕ್ಷಣಾ ಅಧಿಕಾರಿಗಳು ಆದಂತಹ ರಮೇಶ್ ಜಾನಕರ್ ಸರ್ ಅವರು GMPS ರಾವೂರ ಶಾಲೆಗೆ ಭೇಟಿ ಮಾಡಿ CRC ಕೋಣೆಯನ್ನು ಶಾಲಾ ಕಟ್ಟಡವನ್ನು ಮತ್ತು ನಾಲ್ಕನೇ ತರಗತಿಯ ವೀಕ್ಷಣೆಯನ್ನು ಮಾಡಿದರು ನಂತರ ಮಕ್ಕಳಿಗೆ ಕನ್ನಡಮ್ಮನ ಹರಕೆಯ ಪದ್ಯವನ್ನು ಓದಿಸಿದರು ಮಕ್ಕಳು ಸರಾಗವಾಗಿ ಪದ್ಯವನ್ನು ಓದಿದರು ಓದದೆ ಇರುವ ಮಕ್ಕಳಿಗೆ ಸೂಕ್ತ ಚಟುವಟಿಕೆಗಳನ್ನು ಹಾಕಿಕೊಂಡು ಅವರು ಸಹ ಓದುವಂತೆ ಕ್ರಮವಹಿಸಲು ಮಾರ್ಗದರ್ಶನವನ್ನು ನೀಡಿದರು.

CRC ಕೋಣೆಯ ವೀಕ್ಷಣೆ.

ತರಗತಿಯ ವೀಕ್ಷಣೆ.

ಶಾಲಾ ಆವರಣದ ವೀಕ್ಷಣೆ.


Saturday, July 15, 2023

ಸಮಾಲೋಚನೆ ಸಭೆ

 ದಿನಾಂಕ 15 /07/ 2023 ನೇ ದಿನದಂದು ನಾಲ್ಕನೇ ಮತ್ತು 5ನೇ ತರಗತಿಗೆ ಗಣಿತ ಮತ್ತು ಕನ್ನಡ ವಿಷಯವನ್ನು ಬೋಧನೆ ಮಾಡುವ ಶಿಕ್ಷಕರಿಗೆ ಸಮಲೋಚನ ಸಭೆಯನ್ನು ಆಯೋಜನೆ ಮಾಡಲಾಗಿತ್ತು ಈ ಸಭೆಯಲ್ಲಿ ವಿಷಯ ವಸ್ತು ಬೋಧನೆಯಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಮಾಡಲಾಯಿತು.

ಗುಂಪು ರಚನೆ.


GROUP PRESENTATION.



Friday, July 14, 2023

ಸಮಾಲೋಚನೆ ಸಭೆ (ಪ್ರಗತಿ ಪರಿಶೀಲನ ಸಭೆ )

 ದಿನಾಂಕ 14/07/2023 ರ ದಿನದಂದು ನಾಲವಾರ ವಲಯ ಮಟ್ಟದ ನಲಿ ಕಲಿ ಶಿಕ್ಷಕರಿಗೆ ಸಮಾಲೋಚನೆ ಸಭೆಯನ್ನು ಆಯೋಜನೆ ಮಾಡಲಾಗಿತು ಈ ಸಭೆಯಲ್ಲಿ ನಲಿ ಕಲಿ ಸಂಬಂಧಿಸಿದಂತೆ ಪರಿಷ್ಕೃತ ಕಲಿಕಾ ಏಣಿಯ ಬಗ್ಗೆ , ಮಾಹೆವಾರು ಹಂಚಿಕೆಯ ಬಗ್ಗೆ ,ಕಲಿಕೆಯಲ್ಲಿ ನಿಧಾನಗತಿಯಲ್ಲಿ ಇರುವ ಮಕ್ಕಳಿಗೆ ಯಾವ ರೀತಿಯಲ್ಲಿ ಕ್ರೀಯಾಯೋಜನೆ ಹಾಕಿಕೊಳ್ಳುಬೇಕು ಎಂಬುದರ ಬಗ್ಗೆ ,ಈ ಮೇಲ್ಕಂಡ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು.

ಗುಂಪು ರಚನೆ.

ಕನ್ನಡ ಮತ್ತು ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಗುಂಪು ಚಟುವಟಿಕೆ.
ENK LEVEL 1 ಮತ್ತು 2 ರ ಸೇತುಬಂದ ನಿರ್ವಹಣೆ ಮತ್ತು ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು.


Wednesday, July 12, 2023

ನಲಿ ಕಲಿ ತರಗತಿ ಪ್ರಕ್ರಿಯೆ

 ಗಣಿತದ ವಿಷಯಕ್ಕೆ ಸಂಬಂಧಿಸಿದಂತೆ ಘನಾಕೃತಿಗಳ  ಮತ್ತು ಸಮತಲಾಕೃತಿಗಳ  ಪರಿಚಯ .


ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಓತ್ವ ಸ್ವರ ಚಿನ್ಹೆಯ ಪರಿಚಯ ಕೊ,ಖೊ,ಗೊ,ಘೊ,..........ಳೊ.


Friday, July 7, 2023

ಮತದಾನದ ಬಗ್ಗೆ ಜಾಗೃತಿ


 ದಿನಾಂಕ 1.7.2023 ಶನಿವಾರ ದಿನದಂದು ಶ್ರೀ ಸಚ್ಚಿದಾನಂದ ಪ್ರೌಢಶಾಲೆಯಲ್ಲಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲು ಅವರು ಮತಗಟ್ಟೆಗಳನ್ನು ಸ್ಥಾಪಿಸಿ  6 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಿದರು ಎಂಟನೇ ಒಂಬತ್ತನೇ ಹತ್ತನೇ ತರಗತಿಯ ಎಲ್ಲಾ ಮಕ್ಕಳು ಮತದಾನ ಮಾಡುವಂತೆಯೇ  ಮತ್ತು ಮತದಾನದ ಮಹತ್ವ ತಿಳಿಸಿದರು  ಪ್ರತಿಯೊಂದು ಮಕ್ಕಳ ಕೈಯಲ್ಲಿ ಆಧಾರ್ ಕಾರ್ಡ್ ಇವುಗಳನ್ನು ತೋರಿಸಿ ಮಕ್ಕಳು ಮತಗಟ್ಟೆಯಲ್ಲಿ ಮತದಾನವನ್ನು ಮಾಡಿದರು .








ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...